ಅರವಿಂದನ ಕನಸುಗಳು

Just another WordPress.com weblog

ನಲ್ಲ(ಲ್ಲೆ)

ನಲ್ಲ, ಕೇಳಿದ ಮನದಿನೆಯಿಯ
ಒಪ್ಪಿರುವೆಯಾ ಈ ಮನವ,
ನಲ್ಲೆ, ಹೇಳಿದಳು ಮುರಿಯುತ ಮೌನವ,
ತಂದಿರುವೆಯಾ ಬೊಗಸೆ ತುಂಬಾ ತಂಗಾಳಿಯ,
ನಲ್ಲ, ಕೇಳಿದ ಕಾಂತೆಯ,
ತೋರು ನನ್ನ ಮೇಲೆ ಪ್ರೀತಿಯ,
ನಲ್ಲೆ, ಮುರಿಯುತ ಗಾಂಭೀರ್ಯ,
ಇರುವುದೇ ನಿನ್ನಲ್ಲಿ ಇನೋವ, ಎಂದೆನುವಾಗಲೇ
ನಲ್ಲೆ, ಏರಿಹೋದಳು, ಇನ್ನೋರ್ವನ ಬ್ಯೆಕಿನ ಹಿಂಬದಿಯಲ್ಲೇ

November 26, 2008 Posted by | Uncategorized | Leave a Comment

ಭಾರತ ಮಾತ

ಭಾರತ ಮಾತ, ಭಾರತ ಮಾತ
ದೇಶ ಎಂಗೆ ಒಡಕಾಯ್ತು,
ಭಾರತ ಮಾತ, ಭಾರತ ಮಾತ
ಪಾಕಿಸ್ತಾನ ಎಂಗೆ ಬೇರೆ ಆಯ್ತು,

ಭಾರತ ಮಾತ, ಭಾರತ ಮಾತ
ಸ್ವಾತಂತ್ರಕ್ ಮುಂಚೆ ಒಂದೇ ಮತ,
ಭಾರತ ಮಾತ, ಭಾರತ ಮಾತ
ಅದೇಂಗ್ ನಾವೀತ ಹಿಂದೂ ಮತ, ಅವ್ರು ಮುಸ್ಲಿಂ ಅಂತ

ಭಾರತ ಮಾತ, ಭಾರತ ಮಾತ
ನಮ್ದು ಅವ್ರುದು ಒಂದೇ ರಕುತ,
ಭಾರತ ಮಾತ, ಭಾರತ ಮಾತ
ನೀನೆ ಹೇಳು ಉತ್ತರ,
ಎಂಗ್ ಸೆಣಸೋದು ಅವ್ರರತ್ರ

ಅರವಿಂದ್

November 26, 2008 Posted by | Uncategorized | 2 Comments

ಆಶಾ

ಹುಡುಗಿ,

ಕೇಳಲಿಲ್ಲ ನೀ ಯಾರೆಂದು,
ಹೇಳಿದರು ನಾ ಯಾರೆಂದು,
ತಿಳಿಸಲಿಲ್ಲ ನೀ ಯಾರೆಂದು,
ಹೇಳಿದರು ನಾ ನಿನಗೆಂದು,

ಕಾಣಲಿಲ್ಲ, ನಾ ನಿನ್ನ,
ನೋಡಿರುವೆ, ನೀ ನನ್ನ,
ಕಾಣದ ಈ ಪ್ರೀತಿಯನ್ನ,
ನೋಡದಿದ್ದರೂ ನಾ ನಿನ್ನ,
ಕಾಣುತಿರುವೆ, ಕನಸನ್ನ,
ನನಸಾಗಿಸು ಗೆಳತಿ,
ಅದು ನಮ್ಮಿಬ್ಬರ ಪ್ರೀತಿ,

ಇಂದಲ್ಲ, ನಾಳೆ
ನೀ ಎನ್ನ ಪ್ರೀತಿಯಲ್ಲೇ,
ಮುಳುಗಿಸಿ, ನಗಿಸುವ ಆಶೆ(ಶಾ),

ಇರುವೆಯಾ ಗೆಳತಿ,
ಜೀವನದ ಜೊತೆಯಲ್ಲಿ ಸದಾ,
ಜೀವ ಹೋಗುವವರೆಗೂ ಪ್ರೀತಿಸುವ ಈ ಅರವಿಂದ.

November 24, 2008 Posted by | Uncategorized | Leave a Comment

ಕನವರಿಕೆ

ಬಹು ದಿನದ ಕನಸೊಂದು ಕನವರಿಸುತ್ತಿತ್ತು,
ಕನಸಿನ ಹುಡುಗಿ, ಮನಸು ಮಾಡಿ
ಬರಬಹುದೆಂದು ಬ(ಬಾ)ಳಿಗೆ,

ಕನಸಿನಲಿ ಕಂಡ ಕೋಮಲೆಯು,
ಮನಸಿನಲಿ ಮನಸಾಗುವಳೆ,
ಕನಸನ್ನು ಕನವರಿಸುತ ಜೊತೆ ನಿಲ್ಲುವಳೇ,
ಕಾಲವೇ ಯಾಕೆ ಹೀಗೆ ಕಾಯಿಸುತಿರುವೆ.

November 24, 2008 Posted by | Uncategorized | Leave a Comment

   

Follow

Get every new post delivered to your Inbox.