ನಾ ಕಂಡಂತೆ ನನ್ನ ಬಗ್ಗೆ
ನಮಸ್ಕಾರ,
ಅರವಿಂದ್, ಹಾಗಂತಾ ಹೆಸರು ಮಾತ್ರ ಹೇಳಿದರೆ ಏನಿರಬಹುದು ಅದರಲ್ಲಿಯೆಂಬುದಕ್ಕೆ ನನ್ನಲ್ಲೇ ಇರುವ ಜಿಗುಪ್ಸೆ, ಸಾಧಿಸಿದ್ದು ಕೆಲವಾದರೂ ಸಾಧನೆಗೆ ನಿಲುಕದ್ದು, ಮತ್ತು ದಕ್ಕದ್ದು ನೂರಾರು, ಆದರೆ ನಿಲುಕದ ವಿಷಯಗಳನ್ನ ಕ್ಯೆಗೆ ಸಿಗದವರೆಗೂ ಬಿಡುವ ಜಾಯಮಾನವಲ್ಲ. ಹುಟ್ಟಿದ್ದು ಬೆಳೆದದ್ದು ಮಹಾನಗರಿ ಬೆಂಗಳೂರಾದರೂ ತಿರುಗಿದ್ದು, ನೋಡಿದ್ದು ಬಹು ಭಾಗ ಭಾರತವನ್ನು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಒರಿಸ್ಸಾ, ಬಿಹಾರ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹೀಗೆ, ಕರ್ನಾಟಕದಲ್ಲಿನ ತಿರುಗಾಟವಂತೂ ಲೋಕಲ್ ಬಸ್ ತರಹ ಸುತ್ತಿದ್ದೇನೆ. ಆದರೆ ಎಷ್ಟೊ ಸ್ಥಳಗಳ ಪರಿಚಯ ಇದ್ದರೂ ತಿಳಿಯಬೇಕಾಗಿದ್ದು ಇನ್ನೂ ಇದೆ ಅನ್ನೋದಂತೂ ಸತ್ಯ. ಹಾಗಂತ ಮಹತ್ತರ ಸಾಧನೆ ಮಾಡಿ ಮತ್ತೇನೋ ಯಾರೂ ಮಾಡಲಾಗದ್ದನ್ನು ಮಾಡಿದ್ದೇನೆ ಅನ್ಕೊಂಡ್ರೆ ನಿಮ್ಮ ಊಹೆ ಸುಳ್ಳು. ಎಲ್ಲರೂ ಮಾಡುವ ಕೆಲಸವನ್ನೇ, ಆದರೆ ಯೋಚನೆ ಯೋಜನೆಗಳು ವಿಭಿನ್ನ, ಅದು ಮನೆಯಲ್ಲಿನ ಸಾಮಾನುಗಳ ಒಪ್ಪ-ಓರಣವಿರದಿಂದ ಹಿಡಿದು, ಒಂದು ವಿಚಾರದ ಬಗ್ಗೆ ನೋಡುವ ದೃಷ್ಠಿಕೋನ ಎಲ್ಲವೂ. ಇನ್ನೂ ಸಮಾಜದ ಮುಖಿಯಲ್ಲಿ ಬಂದರೆ ಎಷ್ಟೊ ಜನರಿಗೆ ನಾನು ನುಂಗಲಾರದ ಬಿಸಿ ತುಪ್ಪ, ಮತ್ತೆ ಕೆಲವರಿಗೆ ಸಿಹಿಜೇನು. ಎಲ್ಲರಿಗೂ ಒಳ್ಳೆಯವನಲ್ಲದಿದ್ದರೂ ನನ್ನ ನಂಬಿಕೆಗೆ ಅರ್ಹನಾದವರಿಗೆ ಮಾತ್ರ ಸ್ಪಟಿಕ ಮಣಿ. ಇನ್ನೂ ನನ್ನ ವಿರೋಧಿಗಳಿಗೆ ನಾನೊಂದು ಶಮಂತಕ ಮಣಿ.
No comments yet.
Leave a Reply
-
Recent
-
Links
-
Archives
- February 2011 (1)
- November 2008 (4)
- October 2008 (4)
-
Categories
-
RSS
Entries RSS
Comments RSS